ಇನ್ಮುಂದೆ ರೇಷನ್ ಕಾರ್ಡ್ ಇ-ಕೆವೈಸಿ ಮತ್ತಷ್ಟು ಸುಲಭ; ರಾಜ್ಯದ 8 ಜಿಲ್ಲೆಗಳಲ್ಲಿ ಆ್ಯಪ್​​ ಸೇವೆ ಲಭ್ಯ

ಬೆಂಗಳೂರು : ರಾಜ್ಯದಲ್ಲಿ ರೇಷನ್ ಕಾರ್ಡ್​​ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಕೆಲಸ ಕಾರ್ಯ ಬಿಟ್ಟು ಜನರು ಗಂಟೆಗಟ್ಟಲೇ ಕ್ಯೂ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ. ಮತ್ತೊಂಕಡೆ ಸರ್ವರ್​ ಕಾಟ ಜನರನ್ನು ಕಂಗಾಲಾಗಿಸಿದೆ. ಇದೆಲ್ಲದಕ್ಕೂ ಬ್ರೇಕ್​ ಹಾಕಲು ಸರ್ಕಾರ ಮುಂದಾಗಿದ್ದು, ‘ಅನ್ನ ಸೇವೆ ಆ್ಯಪ್’ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಜನರು ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದಾಗಿದೆ.ಆಹಾರ ಇಲಾಖೆ ಸಿದ್ಧಪಡಿಸಿರುವ ಅನ್ನ ಸೇವೆ ಆ್ಯಪ್​​ ಅನ್ನು ಇಂದು ಬೆಂಗಳೂರಿನ ಶಿವಾಜಿನಗರದ ಬ್ರಾಡ್​ವೇನಲ್ಲಿ ಆಹಾರ ಸಚಿವ ರಿಜ್ವಾನ್ ಅರ್ಷದ್​​ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದರು. ಆ ಮೂಲಕ ಅನ್ನ ಸೇವೆ ಆ್ಯಪ್​​ನಲ್ಲಿ ಮೊಬೈಲ್​ನಲ್ಲೇ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದ್ದು, ಇನ್ಮುಂದೆ ಜನರು ಕಚೇರಿಗೆ ಅಲೆಯುವುದು ತಪ್ಪಲಿದೆ.,ಸದ್ಯ ಇದೊಂದು ಪೈಲಟ್ ಪ್ರಾಜೆಕ್ಟ್​ ಆಗಿದ್ದು, 8 ಜಿಲ್ಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳ ಈ ಎಂಟು ಜಿಲ್ಲೆಗಳ ಜನರು ಇ-ಕೆವೈಸಿ ಮಾಡಲು ಅನುಕೂಲವಾಗಲಿದೆ. ಬಳಿಕ ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ಆ್ಯಪ್​ ಬಿಡುಗಡೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆಹಾರ ಸಚಿವ ರಿಜ್ವಾನ್ ಅರ್ಷದ್, ‘ನಾನು ಮಂತ್ರಿ ಆಗಿ 40 ದಿನಗಳು ಆಗಿದೆ. ಬಡವರಿಗೆ ಅನಾನುಕೂಲ ಆಗಬಾರದು. E-KYC ಮಾಡಬೇಕು, ಜನರಿಗೆ ರೇಷನ್ ಕೊಡಬೇಕು. ಎಲ್ಲವೂ ಒಂದೇ ಸರಿ ಮಾಡುವುದಕ್ಕೆ ಕಷ್ಟ ಆಗುತ್ತೆ. ಅದಕ್ಕೆ ಅನ್ನ ಸೇವೆ ಆ್ಯಪ್ ಲಾಂಚ್ ಮಾಡಿದ್ದೇವೆ. 4.5 ಕೋಟಿ ಜನರು ಇದರ ಫಲಾನುಭವಿಗಳಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.‘ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ನ್ಯಾಯ ಬೆಲೆ ಅಂಗಡಿ ಹೋಗಿ ಇ-ಕೆವೈಸಿ ಮಾಡಿಸಬೇಕು. ಆ ತೊಂದರೆ ಬೇಡ ನಾವು 8 ಜಿಲ್ಲೆಯಲ್ಲಿ ಅನ್ನ ಸೇವೆ ಆ್ಯಪ್ ಲಾಂಚ್ ಮಾಡಿದ್ದೇವೆ. ಇದರಿಂದ ಮನೆಯಲ್ಲೇ ಇ-ಕೆವೈಸಿ ಮಾಡಬಹುದು. ಬೇರೆ ಜಿಲ್ಲೆಯ ಅಧಿಕಾರಿಗಳಿಗೆ ಅವಕಾಶ ಮಾಡಿ ಕೊಟ್ಟಿದ್ದೇವೆ. ತಾಂತ್ರಿಕ ಅಡೆತಡೆಗಳನ್ನು ಗಮನಿಸಿ, ನಂತರ ಎಲ್ಲಾ ಕಡೆ ಲಾಂಚ್ ಮಾಡುತ್ತೇವೆ. ನಮ್ಮ ಇಲಾಖೆ ಇನ್ನು ಬೇರೆ ಬೇರೆ ಯೋಜನೆಗಳಿಗೆ ಇದೇ ಆ್ಯಪ್ ಅನ್ನು ಮುಂದಿನ ದಿನಗಳಲ್ಲಿ ಬಳಕೆ ಮಾಡಲಿದೆ. ಮೊದಲು ಮೊಬೈಲ್ ಆ್ಯಪ್ ಪೈಲಟ್ ಪ್ರಾಜೆಕ್ಟ್ ಜಾರಿ ಮಾಡುತ್ತೇವೆ. ಈ ಆ್ಯಪ್​​ನಲ್ಲಿ ನಮ್ಮ ಇಲಾಖೆ ಏನೇನು ಮಾಡುತ್ತದೆ ಗೊತ್ತಾಗುತ್ತೆ’ ಎಂದರು. ಮೊದಲಿಗೆ ಆ್ಯಪ್ ಓಪನ್ ಮಾಡಿ ರೇಷನ್ ಕಾರ್ಡ್ ನಂಬರ್​ ಹಾಕಬೇಕು. ಪರಿಶೀಲಿಸಿದ ನಂತರ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿದರೆ ಫೇಸ್ ರೆಕಗ್ನೈಸೇಷನ್ ಮಾಡಿದರೆ ಇ-ಕೆವೈಸಿ ಆಗುತ್ತೆ.

Related Articles