ಮನೆಗಳ್ಳತನವನ್ನು ತಡೆಗಟ್ಟಲು ಪೊಲೀಸ್ ಇಲಾಖೆಯು ಕಲಬುರಗಿ ಜಿಲ್ಲಾದ್ಯಂತ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಂ’ ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ರವಾಸ, ಹಬ್ಬ ಹಾಗೂ ರಜೆಗಳ ಸಂದರ್ಭದಲ್ಲಿ ಜನರು ಮನೆಗೆ ಬೀಗ ಹಾಕಿ ಹೊರಹೋಗುವುದನ್ನು ಗುರಿ ಮಾಡಿ ಕಳ್ಳತನ ನಡೆಯುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ನಗರದ 10 ಮತ್ತು ಗ್ರಾಮೀಣ ಭಾಗದ 28 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೀಗ ಹಾಕಿದ ಮನೆಗಳ ಮೇಲೆ ವಿಶೇಷ ನಿಗಾ ಇರಿಸಲು ಈ ನೂತನ ಪ್ರಯೋಗವನ್ನು ಅನುಷ್ಠಾನಗೊಳಿಸಲಾಗಿದೆ.



