ಎರ್ಮಾಳು ಬಡಾ ಸಮುದ್ರ ತೀರದಲ್ಲಿ ದೋಣಿ ಪತ್ತೆ

ಪಡುಬಿದ್ರಿ: ಕಳೆದ ಸೋಮವಾರ ಮಲ್ಪೆ ಬಂದರಿನಿಂದ ಹೊರಟಿದ್ದ ಗಿಲ್ ನೆಟ್ ಮೀನುಗಾರಿಕಾ ದೋಣಿಯು ಬಡಾ ಎರ್ಮಾಳಿನಲ್ಲಿ ಪತ್ತೆಯಾಗಿದೆ.

ಮಲ್ಪೆಯಲ್ಲಿ ಕಳೆದ ಸೋಮವಾರ ಬೆಳಿಗ್ಗೆ ೯ ಗಂಟೆಗೆ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿತ್ತು. ಮಧ್ಯಾಹ್ನ ಸುಮಾರು ೨ ಗಂಟೆ ವೇಳೆಗೆ ದೋಣಿಯ ತಳಭಾಗದಿಂದ ನೀರು ಸೋರಿಕೆಯಾಗುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿತ್ತು. ನೀರನ್ನು ಹೊರಹಾಕುವ ಪ್ರಯತ್ನ ನಡೆಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಮಧ್ಯಾಹ್ನ ೩ ಗಂಟೆ ಸುಮಾರಿಗೆ ಭಾರತೀಯ ಕರಾವಳಿ ಕಾವಲು ಪಡೆ ಸಹಾಯವಾಣಿಗೆ ಕರೆ ಮಾಡಿ ನೆರವು ಕೋರಲಾಯಿತು.ಮಾಹಿತಿ ಪಡೆದ ತಕ್ಷಣ ಕೋಸ್ಟ್ ಗಾರ್ಡ್ ಹಡಗು ಸಂಜೆ ಸುಮಾರು ೪ ಗಂಟೆಗೆ ಸ್ಥಳಕ್ಕೆ ಧಾವಿಸಿ, ಅಪಾಯದಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿತು. ಅಪಘಾತಕ್ಕೊಳಗಾದ ಗಿಲ್ ನೆಟ್ ದೋಣಿಯನ್ನು ಎಳೆದುಕೊಂಡು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದನ್ನು ಸಮುದ್ರದಲ್ಲೇ ಬಿಟ್ಟು ರಕ್ಷಣಾ ಕಾರ್ಯ ಪೂರ್ಣಗೊಳಿಸಲಾಗಿತ್ತು. ಈ ಬೋಟ್ ಶುಕ್ರವಾರ ಮಧ್ಯಾಹ್ನದ ವೇಳೆ ಎರ್ಮಾಳು ಬಡಾ ಸಮುದ್ರ ತೀರದಲ್ಲಿ ಪತ್ತೆಯಾಯಿತು.
ಹೆಜಮಾಡಿ ಪಿಎಸ್‌ಐ ಪುಷ್ಪಾ ಅವರ ಮಾರ್ಗದರ್ಶನದಲ್ಲಿ ಅಬ್ದುಲ್ ರಝಾಕ್ ಪುನೀತ್,. ಕರಾವಳಿ ರಕ್ಷಣಾ ತೀರ್ಥ, ರಾಜೇಶ್ ಹಾಗೂ ಇತರರ ಸಹಕಾರದಿಂದ ದಡಕ್ಕೆ ತರಲಾಯಿತು.

Related Articles