ಮಗುವಿನ ಸುರಕ್ಷತೆಗಾಗಿ ಉಡುಪಿ ಪೊಲೀಸರ ಮಾನವೀಯ ಕಾರ್ಯ

ಉಡುಪಿ: ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ರೈ ಅವರು ನಿನ್ನೆ ರಾತ್ರಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಳ್ಸಂಕ ವೃತ್ತದಲ್ಲಿ ಒಬ್ಬ ವ್ಯಕ್ತಿ ಬಾಲಕಿಯೊಂದಿಗೆ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿ, ಮಗುವಿನ ಸುರಕ್ಷತೆಯ ಬಗ್ಗೆ ಆತಂಕಗೊಂಡರು. ತಕ್ಷಣವೇ ಈ ವಿಷಯವನ್ನು ಉಡುಪಿ ಪೊಲೀಸರ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಮಾಹಿತಿ ಪಡೆದ ಉಡುಪಿ ಪೊಲೀಸರು ಇಂದು ಸಂಬಂಧಿತ ವ್ಯಕ್ತಿ ಹಾಗೂ ಅವರ ಗುಂಪನ್ನು ಪತ್ತೆಹಚ್ಚಿ, ಪರಿಶೀಲನೆ ನಡೆಸಿದ ಬಳಿಕ ಮಗುವಿನ ಸುರಕ್ಷತೆ ಹಾಗೂ ಅಗತ್ಯ ಆರೈಕೆಯನ್ನು ಖಚಿತಪಡಿಸುವ ಉದ್ದೇಶದಿಂದ ಅವರನ್ನು ಮಂಗಳೂರಿನ ವಾಮಂಜೂರಿನ ಸರ್ಕಾರಿ ಆಶ್ರಯ ಗೃಹಕ್ಕೆ ಸ್ಥಳಾಂತರಿಸಿದರು.

ಹರಿಪ್ರಸಾದ್ ರೈ ಅವರ ಸಮಯೋಚಿತ ಮಾಹಿತಿ ಹಾಗೂ ಉಡುಪಿ ಪೊಲೀಸರ ತ್ವರಿತ ಮತ್ತು ಮಾನವೀಯ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಕ್ರಮವು ಮಾನವೀಯ ಪೊಲೀಸ್ ಸೇವೆ ಮತ್ತು ಸಾಮಾಜಿಕ ಕಾಳಜಿಯ ಉತ್ತಮ ಮಾದರಿಯಾಗಿದೆ.

Related Articles