ಉಡುಪಿಯಲ್ಲಿ ನಾಳೆ (ಅ.17) ಲಯನ್ಸ್ ದಾಂಡಿಯಾ ನೈಟ್

ಉಡುಪಿ: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲಾ 317ಸಿ ವತಿಯಿಂದ ಲಯನ್ಸ್ ಸದಸ್ಯರು ಹಾಗೂ ಸಾರ್ವಜನಿಕರಿಗಾಗಿ ‘ಲಯನ್ಸ್ ದಾಂಡಿಯಾ ನೈಟ್–2026’ ಕಾರ್ಯಕ್ರಮವನ್ನು ಅ.17ರಂದು ಉಡುಪಿಯ ಅಮೃತ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ. ಲಯನ್ಸ್ ಕ್ಲಬ್ ಬ್ರಹ್ಮಗಿರಿ ಮತ್ತು ಲಯನ್ಸ್ ಕ್ಲಬ್ ಉಡುಪಿ ಅಮೃತ್ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಹಾಗೂ ದ್ವಿತೀಯ ಉಪ ಜಿಲ್ಲಾ ಗವರ್ನರ್ ಎಂಜಿನಿಯರ್ ರಮಾನಂದ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್‌ಗಳ ಸದಸ್ಯರು ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಪಾಲ್ಗೊಂಡು ಸಂಗೀತ ಮತ್ತು ದಾಂಡಿಯಾ ನೃತ್ಯದೊಂದಿಗೆ ಸಂಭ್ರಮಿಸಲಿದ್ದಾರೆ. ಸಾಮಾಜಿಕ ಸೇವೆಯ ಜತೆಗೆ ಸದಸ್ಯರ ನಡುವೆ ಸ್ನೇಹ, ಸೌಹಾರ್ದತೆ ಹಾಗೂ ಸಂಘಟನಾತ್ಮಕ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles