ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ ಕಾರಣ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಆರಂಭವಾದ ಅಭಿಯಾನದಲ್ಲಿ ಪ್ರಧಾನ್ ಅವರ ರಾಜೀನಾಮೆ ಪ್ರಮುಖ ಆಗ್ರಹವಾಗಿತ್ತು. ರಾಜೀನಾಮೆ ನೀಡದೆ ಯಾವುದೇ ಮಾತುಕತೆಗೆ ಸಿದ್ದವಿಲ್ಲ ಎಂದು ಹೇಳಿತ್ತು. ವಿಪಕ್ಷಗಳೂ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದವು.
ಈ ಪರಿಸ್ಥಿತಿಯ ಲಾಭವನ್ನು ಜಂತರ್ ಮಂತರ್ ಹಾಗೂ ದೇಶದಾದ್ಯಂತ ಇರುವ ರಾಷ್ಟ್ರವಿರೋಧಿ ಶಕ್ತಿಗಳು ಪಡೆಯದಂತೆ ನೋಡಿಕೊಳ್ಳಲು, ದೇಶದ ಏಕತೆ ಕಾಪಾಡಲು, ಭಾರತದ ವಿದ್ಯಾರ್ಥಿಗಳು ಕಾನೂನು ತೊಡಕುಗಳಲ್ಲಿ ಸಿಲುಕದೆ ತಮ್ಮ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದತ್ತ ಗಮನಹರಿಸಲು, ನಾನು ಪ್ರಧಾನಮಂತ್ರಿಯವರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ” ಎಂದು ಪ್ರಧಾನ್ ಅವರು ಹಿಂದಿಯಲ್ಲಿ ಬರೆದ ಸುದೀರ್ಘ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



