ಉಡುಪಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ; ಆಕಾಂಕ್ಷಿ ಪಟ್ಟಿಯಲ್ಲಿ 10 ಮಂದಿಯ ಹೆಸರು.!

ಉಡುಪಿ: ಕೆಪಿಸಿಸಿಗೆ ನೂತನ ಸಾರಥಿಯ ಆಯ್ಕೆ ಬಳಿಕ ಇದೀಗ ಜಿಲ್ಲಾ ಮಟ್ಟದಲ್ಲಿಯೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಉಡುಪಿ ಜಿಲ್ಲೆಯಲ್ಲೂ ಕಾಂಗ್ರೆಸ್ ಚಟುವಟಿಕೆ ಗರಿಗೆದರಿದ್ದು, 10 ಮಂದಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಕುಂದಿದ್ದು, ಯಾವೊಬ್ಬ ಎಂಎಲ್‌ಎ ಅನ್ನು ಹೊಂದಿಲ್ಲ. ಹೀಗಾಗಿ 2028 ರ ಚುನಾವಣೆಗೆ ಮುನ್ನಾ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಸೂಕ್ತ ಆಯ್ಕೆಯತ್ತ ಕೆಪಿಸಿಸಿಯೂ ಗಮನಹರಿಸಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಯುವಕರನ್ನ ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು ಪಕ್ಷದ ಚಟುವಟಿಕೆಯು ಗರಿಗೆದರುವಂತೆ ಮಾಡಿದೆ.ಇನ್ನು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 10 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಹಾಲಿ ಅಧ್ಯಕ್ಷ ‌ಅಶೋಕ್ ಕೊಡವೂರು ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿಲ್ಲ. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದವರ ಹೆಸರು:
1.ಪ್ರಖ್ಯಾತ್ ಶೆಟ್ಟಿ
2.ಅಶೋಕ್ ಪೂಜಾರಿ
3.ನವೀನ್ ಚಂದ್ರ ಶೆಟ್ಟಿ ಪಡುಬಿದ್ರೆ
4.ಮುರಲಿ ಶೆಟ್ಟಿ
5.ಕೀಶನ್ ಹೆಗ್ಡೆ
6.ಕೀರ್ತಿ ಶೆಟ್ಟಿ
7.ಹರಿಪ್ರಸಾದ್ ರೈ
8.ರಮೇಶ್ ಕಾಂಚನ್
9.ಕಿರಣ್ ಹೆಗ್ಡೆ
10.ಭುಜಂಗ ಶೆಟ್ಟಿ

Related Articles