ಉಡುಪಿ: ಲಯನ್ಸ್ ಕ್ಲಬ್ ಕಲ್ಯಾಣಪುರ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಕಲ್ಯಾಣಪುರದ ಟ್ರೈ ಸೆಂಟೇನರಿ ಸಭಾಂಗಣದಲ್ಲಿ ನಡೆಯಿತು.
ಲಯನ್ಸ್ ಜಿಲ್ಲೆ 317ಸಿ ಇದರ ಪ್ರಥಮ ಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಎಂ.ಜೆ.ಎಫ್. ಅವರು ನೂತನ ಅಧ್ಯಕ್ಷ ಲಯನ್ ವಿಲ್ಸನ್ ಫೆರ್ನಾಂಡಿಸ್ ಎಂ.ಜೆ.ಎಫ್., ಕಾರ್ಯದರ್ಶಿ ನಂದ ಕಿಶೋರ್ ಕೆಮ್ಮಣ್ಣು, ಖಜಾಂಚಿ ಲಯನ್ ಸುರೇಂದ್ರ ಕೆ. ಅಮೀನ್ ಸೇರಿದಂತೆ ಕ್ಲಬ್‌ನ ಇತರ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಆಪತ್ಬಾಂಧವ ಮಹೇಶ್ ಹೊಡೆ, ಅನಿಲ್ ಮೆಂಡೋನ್ಸ ಮೂಡಬಿದ್ರೆ ಹಾಗೂ ರಂಗ ಕಲಾವಿದ ಮತ್ತು ನಿರೂಪಕ ಪ್ರವೀಣ್ ಚಂದ್ರ ತೋನ್ಸೆ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ಲಾನೆಟ್ ಮಾರ್ಸ್ ಫೌಂಡೇಶನ್ ಹಾಗೂ ಮಟ್ಪಾಡಿ ವಿಜಯ ಬಾಲನಿಕೇತನ ಬಾಲಾಶ್ರಮಕ್ಕೆ ಧನಸಹಾಯ ವಿತರಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗುತ್ತಿರುವ ‘ಅಮರವೀರ ಗೀತ ಗಾಯನ ಸ್ಪರ್ಧೆ’ಯ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ನೂತನವಾಗಿ ಆರಂಭಗೊಂಡ ಲಯನ್ಸ್ ಸಂಸ್ಥೆ ಕೆಮ್ಮಣ್ಣು ಇದರ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ಲಯನ್ ಕರುಣಾಕರ ಬಂಗೇರ, ಪ್ರಾಂತೀಯ ಕಾರ್ಯದರ್ಶಿ ಲಯನ್ ಸುಧಾಕರ್ ಪೂಜಾರಿ, ವಲಯಾಧ್ಯಕ್ಷೆ ಲಯನ್ ಜಯಶ್ರೀ ಉಪಸ್ಥಿತರಿದ್ದರು. ಲಯನ್ ರಿಚರ್ಡ್ ಕ್ರ್ಯಾಷ್ಟೋ ಸ್ವಾಗತಿಸಿದರು. ನಂದ ಕಿಶೋರ್ ವಂದಿಸಿದರು. ಲಯನ್ ರಾಮದಾಸ್ ಶೆಟ್ಟಿಗಾರ್ ಎಂ.ಜೆ.ಎಫ್. ಹಾಗೂ ಲಯನ್ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
ಲಯನ್ ರಿಚರ್ಡ್ ಕ್ರ್ಯಾಷ್ಟೋ ಸ್ವಾಗತಿಸಿದರು. ನಂದ ಕಿಶೋರ್ ವಂದಿಸಿದರು. ಲಯನ್ ರಾಮದಾಸ್ ಶೆಟ್ಟಿಗಾರ್ ಎಂ.ಜೆ.ಎಫ್. ಹಾಗೂ ಲಯನ್ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.



