ಉಡುಪಿ : ಸಿಎಂ ಡಿಕೆ ಶಿವಕುಮಾರ್ ರವರ ಸಚಿವ ಸಂಪುಟ ವಿಸ್ತರಣೆ ಆಯಿತು, ಗೊಂದಲದಲ್ಲಿದ್ದ ಸಚಿವರ ಖಾತೆ ಹಂಚಿಕೆಯು ಆಯಿತು. ಈಗ ಜಿಲ್ಲಾ ಉಸ್ತುವಾರಿಗಳ ಸರದಿ, ಹೌದು ರಾಜ್ಯದ ಜಿಲ್ಲೆಗಳ ಉಸ್ತುವಾರಿ ಸಚಿವರು ಯಾರು ಎಂಬ ಪ್ರಶ್ನೆ ಶುರು ಆಗಿದೆ. ಅದರಲ್ಲೂ ಒಂದೇ ಒಂದು ಕಾಂಗ್ರೆಸ್ ಶಾಸಕರಿಲ್ಲದ ಉಡುಪಿಗೆ ಮುಂದಿನ ಉಸ್ತುವಾರಿ ಯಾರು ಎಂಬುವುದು ಕಾಂಗ್ರೆಸ್ ಪಾಳಯದಲ್ಲಿ ಲೆಕ್ಕಚಾರ ಜೋರಾಗಿದೆ. ಇತ್ತೀಚಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಚಿವರ ಪಟ್ಟಿಯಲ್ಲಿ ಉಡುಪಿಗೆ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವರಾಗಿರುವ ಬಸವಂತಪ್ಪರವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಸಚಿವರಾಗಿರುವ ಬಸವಂತಪ್ಪ ರವರೆ ಮುಂದಿನ ಉಡುಪಿ ಉಸ್ತುವಾರಿ ಆಗುತ್ತಾರ ಎಂಬ ಲೆಕ್ಕಚಾರ ಶುರುವಾಗಿದೆ.

ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವಂತಹ ಯು ಟಿ ಖಾದರ್ ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಆಗಬಹುದು.! . ಹಾಗಾಗಿ ಸದ್ಯ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಸಚಿವರಾಗಿರುವ ಬಸವಂತಪ್ಪ ಅವರವರು ಉಡುಪಿಯ ಉಸ್ತುವಾರಿ ಸಚಿವರು ಎನ್ನುವ ಸಾಧ್ಯತೆಗಳು ಹೆಚ್ಚಾಗಿವೆ.


