ಮುದರಂಗಡಿ ಡೇವಿಡ್ ಶೂಟೌಟ್ ಪ್ರಕರಣ- ಆರೋಪಿಗಳ ಪೋಲಿಸ್ ಕಸ್ಟಡಿ ಅಂತ್ಯ ; ಆ.20 ರವರೆಗೆ ನ್ಯಾಯಾಂಗ ಬಂಧನ

ಉಡುಪಿ: ಮಾಜಿ ರೌಡಿಶೀಟರ್ ಡೇವಿಡ್‌ ಡಿಸೋಜಾನನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳಾದ ಆಕಾಶ್ ಅಲಿಯಾಸ್ ಅನ್ಮೋಲ್ ಹಾಗು ಜಿಯಾವುಲ್ಲ ಅಲಿಯಾಸ್ ದೀಪಕ್‌ನನ್ನು ಗುರುವಾರ ಸಂಜೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ನ್ಯಾಯಧೀಶ ಎಮ್.ಪುರುಷೋತ್ತಮ್ ಅವರ ಮುಂದೆ ಹಾಜರು ಪಡಿಸಲಾಯಿತು.

ಪ್ರಕರಣದ ತನಿಖಾಧಿಕಾರಿ ಅಜ್ಮತ್ ಅಲಿಯವರ ನೇತೃತ್ವದಲ್ಲಿ ಆ.10 ರಂದು ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ಪೋಲಿಸ್ ಕಸ್ಟಡಿಗೆ ಪಡೆಯಲಾಗಿತ್ತು. ಇಬ್ಬರು ಆರೋಪಿಗಳ ಮಹಜರು ಪ್ರಕ್ರಿಯೆ ಸೇರಿದಂತೆ ವಿಚಾರಣೆ ಪೂರ್ಣಗೊಂಡ ಹಿನ್ನಲೆಯಲ್ಲಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ಆ.20 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Related Articles