ಉಡುಪಿ : ಶಿರ್ವ ಠಾಣಾ ವ್ಯಾಪ್ತಿಯ ಮುದರಂಗಡಿಯಲ್ಲಿ ಮಾಜಿ ರೌಡಿಶೀಟರ್ ಡೇವಿಡ್‌ನನ್ನು ಆಗಸ್ಟ್ 7 ಶೂಟ್ ಮಾಡಿದ್ದ ರಾಜು ಹಾಗು ಆತನ ತಂಡವನ್ನು ಕಳುಹಿಸಿದ್ದು ಅನೂಜ್. ಆರೋಪಿ ಅನೂಜ್‌ಗೆ ಸೋಮವಾರ, ಹೆಬ್ರಿಯ ಬಳಿ ಮೂತ್ರಕ್ಕೆಂದು ಕೆಳಗಿಸಿದಾಗ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ಕು ರಾಜ್ಯಕ್ಕೆ ಬೇಕಿದ್ದ ನಟೋರಿಯಸ್ ಆರೋಪಿ ಅನೂಜ್ ಗುಜರಾತ್, ಮಹಾರಾಷ್ಟ್ರ, ಗೋವಾ ಹಾಗು ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಕ್ಕೆ ಬೇಕಿದ್ದ ಮೋಸ್ಟ್ ವಾಂಟೆಡ್. ಕೊಲೆ ಮಾಡಲು ಸುಪಾರಿ ಪಡೆಯುವುದು, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಈತನು ಖಾಕಿಯ ನಿದ್ದೆಗೆಡಿಸಿದ್ದನು. ಇವನನ್ನು ಜಿಲ್ಲಾ ಪೋಲಿಸರ ತಂಡ 2,471 ಕಿಮೀ ಹೆಚ್ಚು ಪ್ರಯಾಣ ಬೆಳೆಸಿ ಬಂಧಿಸಿದ್ದಾರೆ.



