ಕಾರ್ಕಳದಲ್ಲಿ ಸೌಂದರ್ಯ–ಚರ್ಮ ಆರೈಕೆಗೆ ಹೊಸ ಸ್ಪರ್ಶ; ‘ಅನುವಾ’ ಕ್ಲಿನಿಕ್ ಶುಭಾರಂಭ

ಕಾರ್ಕಳ : ಚರ್ಮದ ಆರೋಗ್ಯ, ಸೌಂದರ್ಯ ಹಾಗೂ ಕೇಶ ಸಂರಕ್ಷಣೆಗೆ ಆಧುನಿಕ ವೈದ್ಯಕೀಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಕಾರ್ಕಳ ನಗರದಲ್ಲಿ ನೂತನ ‘ಅನುವಾ ಸ್ಕಿನ್, ಹೇರ್ & ಎಸ್ತೆಟಿಕ್ ಕ್ಲಿನಿಕ್’ ಆರಂಭಗೊಂಡಿದೆ.

ನಗರದ ಜೋಡುರಸ್ತೆ ಜಂಕ್ಷನ್‌ನ ಫಾರ್ಚೂನ್ ಲೋಟಸ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಕ್ಲಿನಿಕ್ ಕಾರ್ಯಾರಂಭಿಸಿದ್ದು, ಚರ್ಮರೋಗ ತಜ್ಞೆ ಡಾ. ಪಿ. ಅನುಷಾ ಡಿಸೋಜಾ ಅವರ ಉಸ್ತುವಾರಿಯಲ್ಲಿ ಸೇವೆ ನೀಡಲಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಸುಧಾರಿತ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಂಡಿರುವ ಕ್ಲಿನಿಕ್, ಚರ್ಮ ಹಾಗೂ ಕೇಶ ಸಂಬಂಧಿತ ಸಮಸ್ಯೆಗಳಿಗೆ ವೈಯಕ್ತಿಕ ಕಾಳಜಿಯೊಂದಿಗೆ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದೆ. ಲೇಸರ್ ಹೇರ್ ರಿಮೂವಲ್, ಮೆಡಿಫೇಶಿಯಲ್ಸ್, ಕೂದಲು ಉದುರುವಿಕೆ ನಿಯಂತ್ರಣ ಹಾಗೂ ಕೇಶ ಸಂರಕ್ಷಣೆಯ ವಿವಿಧ ಚಿಕಿತ್ಸೆಗಳು ಇಲ್ಲಿ ಲಭ್ಯವಿರಲಿವೆ. ಚರ್ಮದ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಸಲಹೆ ಹಾಗೂ ಅಗತ್ಯ ಚಿಕಿತ್ಸೆಯನ್ನು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಒದಗಿಸಲಾಗುತ್ತದೆ. ಕಾರ್ಕಳ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಆಧುನಿಕ ಎಸ್ತೆಟಿಕ್ ಹಾಗೂ ಚರ್ಮ ವೈದ್ಯಕೀಯ ಸೇವೆಗಳು ಲಭ್ಯವಾಗುವಂತಾಗಿರುವುದು ಕ್ಲಿನಿಕ್‌ನ ಪ್ರಮುಖ ವಿಶೇಷತೆಯಾಗಿದೆ. ಇದರಿಂದ ಇಂತಹ ಚಿಕಿತ್ಸೆಗಳಿಗಾಗಿ ಮಂಗಳೂರು, ಬೆಂಗಳೂರು ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾದ ಅಗತ್ಯ ಕಡಿಮೆಯಾಗಲಿದೆ. ವೈದ್ಯಕೀಯ ಕೌಶಲ್ಯ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನದೊಂದಿಗೆ ‘ಅನುವಾ’ ಕ್ಲಿನಿಕ್ ಸೇವೆ ಆರಂಭಿಸಿದೆ.

Related Articles