ದರ್ಶನ್ ಜಾಮೀನು ಕನಸು ಭಗ್ನ

ಬೆಂಗಳುರು : ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ವರ್ಷಕ್ಕೂ ಹೆಚ್ಚು ಸಮಯವಾಯ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್​​ಗೆ ಈ ಹಿಂದೆ ವೈದ್ಯಕೀಯ ಆಧಾರದಲ್ಲಿ ಜಾಮೀನು ದೊರಕಿತ್ತು, ಕೆಲ ತಿಂಗಳುಗಳ ಕಾಲ ಜೈಲಿನಿಂದ ಹೊರಗಿದ್ದರು, ಆದರೆ ಸುಪ್ರೀಂಕೋರ್ಟ್, ಜಾಮೀನು ರದ್ದು ಮಾಡಿರುವುದು ಮಾತ್ರವೇ ಅಲ್ಲದೆ, ಇನ್ನೊಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸದ ಹಾಗೆ ತಡೆದಿದೆ. ಆದರೆ ದರ್ಶನ್ ಅವರು ಜಾಮೀನು ಪಡೆಯಲು ಪ್ರಯತ್ನಗಳನ್ನು ನಿಲ್ಲಿಸಿಲ್ಲ, ಆದರೆ ಪ್ರತಿಬಾರಿ ಅವರಿಗೆ ನಿರಾಸೆಯೇ ಎದುರಾಗುತ್ತಿದೆ. ಈ ಬಾರಿ ದರ್ಶನ್ ಜಾಮೀನು ಪಡೆಯುವ ಉದ್ದೇಶದಿಂದ ಪ್ರಾಥಮಿಕ ಅರ್ಜಿಯೊಂದನ್ನು ಸಲ್ಲಸಿದ್ದರು, ಆದರೆ ಆ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ತಿರಸ್ಕೃತಗೊಂಡಿದೆ.

ಕಳೆದ ಬಾರಿ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ‘ದರ್ಶನ್ ಪ್ರಕರಣದಲ್ಲಿ ಒಂದು ವರ್ಷದ ಒಳಗಾಗಿ ಸುಮಾರು 60 ಸಾಕ್ಷಿಗಳ ವಿಚಾರಣೆ ಮಾಡದಿದ್ದರೆ ಆಗ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್, ಹೇಳಿತ್ತು. ಆ ಮೂಲಕ ಮುಂದಿನ ಒಂದು ವರ್ಷದ ವರೆಗೆ ದರ್ಶನ್​​ಗೆ ಜಾಮೀನು ಸಲ್ಲಿಸಲು ಅವಕಾಶವನ್ನು ನಿರಾಕರಿಸಲಾಗಿತ್ತು. ಆದರೆ ಈ ಆದೇಶದ ತಿದ್ದುಪಡಿಗೆ ಆಗ್ರಹಿಸಿ ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು, ಆದರೆ ನ್ಯಾಯಾಲಯದ ಹೊಸ್ತಿಲಲ್ಲೇ ದರ್ಶನ್ ಅರ್ಜಿ ತಿರಸ್ಕೃತಗೊಂಡಿದೆ.ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರಲು ಅನುವು ಮಾಡಿಕೊಡುವಂತೆ ಕೋರಿ ನಟ ದರ್ಶನ್ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ತಮ್ಮ ಜಾಮೀನಿನ ಕುರಿತಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಿದ್ದುಪಡಿಗೆ ಸಹ ದರ್ಶನ್ ಆಗ್ರಹಿಸಿದ್ದರು. ಆದರೆ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ವಿಚಾರಣೆಗೆ ಬರುವುದಕ್ಕೆ ಮುಂಚೆಯೇ ಅರ್ಜಿ ತಿರಸ್ಕೃತಗೊಂಡಿದೆ. ‘ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ’ ಎಂದು ಕಾರಣ ನೀಡಿ ಸುಪ್ರೀಂಕೋರ್ಟ್ ರಿಜಿಸ್ಟಾರ್ ಅವರು ಅರ್ಜಿಯನ್ನು ತಿರಸ್ಕಾರ ಮಾಡಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ದರ್ಶನ್ ಪರ ವಕೀಲರಿಗೆ ಸುಪ್ರೀಕೋರ್ಟ್ ರಿಜಿಸ್ಟರ್ ಸೂಚಿಸಿದ್ದಾರೆ.ಇತ್ತೀಚೆಗಷ್ಟೆ ನಟ ದರ್ಶನ್ ಅವರ ಪರ ವಕೀಲರ ಬದಲಾವಣೆ ಆಗಿದೆ. ಈ ಹಿಂದೆ ದರ್ಶನ್ ಅವರನ್ನು ಹಾಗೂ ಇದೇ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳ ಪರ ವಕೀಲರಾಗಿದ್ದ ಸುನಿಲ್ ಕುಮಾರ್ ಅವರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ದರ್ಶನ್ ಪರವಾಗಿ ಹಶ್ಮತ್ ಪಾಶಾ ಅವರು ವಾದ-ಪ್ರತಿವಾದ ಮಾಡಲಿದ್ದಾರೆ. ವಕೀಲರು ಬದಲಾದ ಹಿಂದೆಯೇ ಇದೀಗ ದರ್ಶನ್​​ ಪರವಾಗಿ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಹಾಕುವ ಪ್ರಯತ್ನ ನಡೆದಿದೆ. ಆದರೆ ಅದು ವಿಫಲವಾಗಿದೆ.

Related Articles