ಮಂಗಳೂರು: ಬಂಟ್ವಾಳದ ಬಿಸಿರೋಡ್‌ನಲ್ಲಿ ನಿನ್ನೆ ( ಗುರುವಾರ ) ನಡೆದ ಭೀಕರ ಹತ್ಯೆ ಪ್ರಕರಣ ಕರಾವಳಿ ಭಾಗವನ್ನು ಬೆಚ್ಚಿಬೀಳಿಸಿದೆ. ಲಾವಣ್ಯ ಎಂಬ ಯುವತಿಯನ್ನು ಚೇತನ್ ಎಂಬ ಯುವಕ ನಡುರೋಡಲ್ಲಿ ಕೊಚ್ಚಿ ಕೊಂದಿದ್ದು, ಆ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿ ಆತಂಕ ಹುಟ್ಟುಹಾಕಿತ್ತು. ಇದೀಗ ಈ ಪ್ರಕರಣದ ಆರೋಪಿ ಚೇತನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹತ್ಯೆ ಮಾಡಿ ಓಡಿ ಹೋಗಿದ್ದ ಚೇತನ್ ಅರೆಸ್ಟ್ ಆಗಿದ್ದಾರೆ.

ಬಂಟ್ವಾಳ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಡುರೋಡಲ್ಲಿ ಲಾವಣ್ಯಳನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ಚೇತನ್ ಅನ್ನು ಬಂಧಿಸಿದ್ದಾರೆ. ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇವರ ಸಂಬಂಧದ ಬಗ್ಗೆ ಕುಟುಂಬಸ್ಥರು ಕೂಡ ಕೆಲವು ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾರೆ.



