ಮಂಗಳೂರು :ಕರಾವಳಿಯನ್ನು ಬೆಚ್ಚಿ ಬೀಳಿಸಿದ ಬಿಸಿ ರೋಡ್ನಲ್ಲಿ ನಡೆದ ಲಾವಣ್ಯ ಕೊಲೆ ಪ್ರಕರಣ ಈಗ ಮತ್ತಷ್ಟು ಚರ್ಚೆಯ ಕೇಂದ್ರ ಬಿಂದುವಾಗಿದೆ. 4 ವರ್ಷದ ಹಿಂದೆಯೇ ಬ್ರೇಕಪ್ ಆಗಿದ್ದರೂ ಕೂಡಾ ಚೇತನ್ ಲಾವಣ್ಯ ಜೊತೆ ಜಗಳ ಮಾಡಿದ್ದು ಇಬ್ಬರೂ ಒಂದೇ ಬಸ್ನಲ್ಲಿ ಬಂದಿದ್ದರು ಎನ್ನಲಾಗಿದೆ. ಬಂಟ್ವಾಳದ ಬಿಸಿರೋಡ್ ನಲ್ಲಿ ಯುವತಿ ಲಾವಣ್ಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ಅಕ್ಕನ ಗಂಡ ಈಗ ಹೇಳಿಕೆ ಕೊಟ್ಟಿದ್ದಾರೆ. ಲಾವಣ್ಯ ಕೊನೆಯಾದಾಗಿ ಮಾತನಾಡಿದ್ದು ಭಾವ ಗೌತಮ್ ಜೊತೆ ಎನ್ನಲಾಗಿದೆ.ಗೌತಮ್ ಕಾಲ್ ನಲ್ಲಿದ್ದಾಗಲೇ ಚೇತನ್ ಲಾವಣ್ಯಳ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಲಾವಣ್ಯಳ ಅಕ್ಕನ ಗಂಡ ಗೌತಮ್ ಕೊನೆ ಕ್ಷಣದ ಮಾತುಕತೆ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಕೊಟ್ಟಿದ್ದಾರೆ. ಅಕ್ಕನಿಗೆ ಕಾಲ್ ಮಾಡಿದ್ದ ಲಾವಣ್ಯ ನಾಲ್ಕು ವರ್ಷದ ಹಿಂದೆ ಬ್ರೇಕಪ್ ಆಗಿದ್ದ ಬಗ್ಗೆ ಮಾಹಿತಿ ಇತ್ತು. ನಾನು ಮದುವೆಯಾಗಿ ಕೇವಲ ಒಂದು ವರ್ಷ ಆಗಿದೆ. ನಿನ್ನೆ ಸಂಜೆ ಲಾವಣ್ಯ ಬಸ್ ನಲ್ಲಿದ್ದಾಗ ಚೇತನ್ ಬಂದಿದ್ದಾನೆ. ಆಗ ಲಾವಣ್ಯ ನನ್ನ ಹೆಂಡತಿಗೆ ಕಾಲ್ ಮಾಡಿ ಹೇಳಿದ್ದಳು ಎಂದಿದ್ದಾರೆ
ಭಾವನ ಕಾಲ್ ಬಂದಾಗ ಪಕ್ಕದಲ್ಲೇ ಇದ್ದ ಚೇತನ್
ಚೇತನ್ ಕಿರಿಕಿರಿ ಮಾಡುತ್ತಿರುವ ಬಗ್ಗೆ ಲಾವಣ್ಯ ಅಕ್ಕನೊಂದಿಗೆ ಹೇಳಿದ್ದಳು. ಆಗ ಹೆಂಡತಿ ಲಾವಣ್ಯಗೆ ಕಾಲ್ ಮಾಡೋಕೆ ಹೇಳಿದಳು. ನಾನು ಲಾವಣ್ಯಗೆ ಕಾಲ್ ಮಾಡಿದಾಗ ಚೇತನ್ ಹತ್ತಿರದಲ್ಲೇ ಚೇತನ್ ಗೆ ಮೊಬೈಲ್ ಕೊಡು ಅಂತಾ ಹೇಳಿದೆ. ಅಷ್ಟರಲ್ಲಾಗಲೇ ಕಿರುಚಾಟ ಕೇಳಿಸಿತು. ಹತ್ತೇ ಸೆಕೆಂಡ್ ನಲ್ಲಿ ಕೊಲೆ ಮಾಡಿದ್ದಾನೆ. ಚೇತನ್ ಗೆ ಪೊಲೀಸರು ಕಠಿಣ ಶಿಕ್ಷೆ ನೀಡಬೇಕು ಎಂದಿದ್ದಾರೆ.

ಸದ್ಯ ಬಂಟ್ವಾಳ ದ ಬಿಸಿರೋಡ್ ನಲ್ಲಿ ಯುವತಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಂತಕ ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಪೊಲೀಸರಿಂದ ಚೇತನ್ ಬಂಧನವಾಗಿದೆ.



