ಉಡುಪಿ: ಮಾಜಿ ರೌಡಿಶೀಟರ್ ಡೇವಿಡ್‌ನನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳಾದ ಆಕಾಶ್ ಅಲಿಯಾಸ್ ಅನ್ಮೋಲ್ ಹಾಗು ಜಿಯಾವುಲ್ಲ ಅಲಿಯಾಸ್ ದೀಪಕ್‌ನನ್ನು ಸೋಮವಾರ ಬೆಳಗ್ಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ನ್ಯಾಯಧೀಶ ಎಮ್.ಪುರುಷೋತ್ತಮ್ ಅವರ ಮುಂದೆ ಹಾಜರು ಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು, ಆರೋಪಿಗಳಿಗೆ ಅಗತ್ಯವಿದ್ದಲ್ಲಿ ವೈದ್ಯಕೀಯ ಪರೀಕ್ಷೆ, ಬಟ್ಟೆ ಬದಲಿಸಲು ಅವಕಾಶ ಹಾಗೂ ಆಹಾರವನ್ನು ನೀಡಿ ಎಂದು ಹೇಳಿದರು. ಪ್ರಕರಣ ತನಿಖಾಧಿಕಾರಿ ಅಜ್ಮತ್ ಅಲಿ, ಸಹಾಯಕ ಸರಕಾರಿ ಅಭಿಯೋಜಕ ಹಾಜರಿದ್ದರು. ಪೋಲಿಸ್ ಕಸ್ಟಡಿಗೆ ಪಡೆದ ಆರೋಪಿಗಳಾ್ಆ ಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ಎಂಬುವನ ಮೇಲೆ ಸುಮಾರು 08 ಪ್ರಕರಣಗಳು ದೆಹಲಿ, ಹರಿಯಾಣ, ಮಹಾರಾಷ್ಟ್ರ ಹಾಗೂ ವಿವಿಧ ರಾಜ್ಯಗಳಲ್ಲಿ ದಾಖಲಾಗಿದೆ. ಜಿಯಾವುಲ್ಲ ಅಲಿಯಾಸ್ ದೀಪಕ್ ಎಂಬುವನ ಮೇಲೆ ಸುಮಾರು 12 ಪ್ರಕರಣಗಳು ವಿವಿಧ ರಾಜ್ಯಗಳಲ್ಲಿ ದಾಖಲಾಗಿದೆ. ಪ್ರಕರಣದಲ್ಲಿ ಎ 1 ಆರೋಪಿಯಾದ ಶೂಟರ್ ರಾಜು ಮೇಲೆ ಸುಮಾರು 17 ಪ್ರಕರಣಗಳು ಉತ್ತರ ಪ್ರದೇಶ, ರಾಜಸ್ಥಾನ್, ಹರಿಯಾಣ, ದೆಹಲಿ ರಾಜ್ಯಗಳಲ್ಲಿ ದಾಖಲಾಗಿದ್ದು, ಕಾಪು ಪಿಎಸ್ಐ ತೇಜಸ್ವಿಯವರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಬಂಧಿಸಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


