ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಹರಿಪ್ರಸದ ರೈ ಅವರು, ಇಂದು ತನ್ನವತಿಯಿಂದ ಮೂಡು ಅಲೆವೂರು ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಲಸ್ಟರ್ ಸಂಯೋಜಕರಾದ ಪ್ರದೀಪ್ ಕುಮಾರ್ ರವರು, ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಭಾವತಿ ಆರ್ ಶೆಟ್ಟಿ, ಎಸ್ಟಿಡಿ ಎಂ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ, ವಿಷ್ಣು ಸೇವಾ ಬಳಗದ ಸುರೇಶ್ ನಾಯ್ಕ್, ಮಹಿಳಾ ಮಂಡಲದ ಶ್ರೀಮತಿ ಗೀತಾ, ಹಾಗೂ ಶಾಲಾ ಉಪಾಧ್ಯಾಯರಾದ ಶ್ರೀ ಲತ ಮತ್ತು ದಿವ್ಯ ಉಪସ್ಥಿತರಿದ್ದರು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಹರಿಪ್ರಸ ದ ರೈ ವರು ಕ್ರೀಡಾ ಸಮವಸ್ತ್ರ ವಿತರಿಸಿದರು. ಈ ಸಂದರ್ಭದಲ್ಲಿ ಹರಿಪ್ರಸದ ರೈ ವರಿಗೆ ಶಾಲಾವತಿಯಿಂದ ಸನ್ಮಾನಿಸಲಾಯಿತು.



